ಕೆನಡಾದ ಟೊರಾಂಟೋನಗರದ ಅಕ್ಕ-ಪಕ್ಕದ ಉಪನಗರಗಳ ಪಟ್ಟಿಹೀಗಿದೆ. ಅವನ್ನು 'ಟೊರಾಂಟೋ ನೈಬರ್ ಹುಡ್, ( ), ಎನ್ನುತ್ತಾರೆ. ಅಲ್ಲಿವಾಸಿಸುವ ಹಲವಾರುಜನಸಮುದಾಯಗಳ ಸಹಬಾಳ್ವೆಯಿಂದ ನಗರ ಶ್ರೀಮಂತವಾಗಿದೆ. ಮೇಲಕ್ಕೆ ಹೋದಂತೆ, ಒಟ್ಟು ೨೪೦ 'ನೈಬರ್ ಹುಡ್' ಗಳಿಂದ ಸುತ್ತುವರೆದಿವೆ. == ಹಳೆಯ ಟೊರಾಂಟೋ == ೧೯೯೮, ಕ್ಕಿಂತ ಮೊದಲು ಟೊರೋಂಟೋ ಒಂದು ಅತಿ ಸಣ್ಣ ಮುನಿಸಿಪಾಲಿಟಿಯಾಗಿತ್ತು. ಟೊರಾಂಟೋನಗರ ಮೆಟ್ರೊಪಾಲಿಟನ್ ವಲಯದ ಭಾಗವಾಗಿತ್ತು. ನಂತರ ಟೊರಾಂಟೋ, ಯಾರ್ಕ್ ಮುನಿಸಿಪಾಲಿಟಿಯಜೊತೆ, ಪೂರ್ವ ಯಾರ್ಕ್ ಜೊತೆ, ಉತ್ತರ ಯಾರ್ಕ್, ಎಟೋಬಿಕೋಕ್, ಮತ್ತು ಸ್ಕಾರ್ಬೊರೊ ಸಹಿತ ಸೇರಿತು. ಈಗಲೂ ಭಾಷೆಯ ಬಳಕೆ ಮತ್ತು ಜನಸಮುಸದಾಯಗಳ ಹಬ್ಬ ಹರಿದಿನ, ಸಾಂಪ್ರದಾಯಿಕ ನಡುವಳಿಕೆಗಳಲ್ಲಿ ಅವುಗಳ ಪರಿಛಾಯೆಗಳನ್ನು ಕಾಣುತ್ತೇವೆ. ಅಲ್ಲಿನ ನಾಗರಿಕರು ಇನ್ನೂ ಹಳೆಯ ಹೆಸರುಗಳನ್ನೇ ಇಂದಿಗೂ ಸ್ಮರಿಸುತ್ತಾರೆ. ಇಲ್ಲಿವಾಸಿಸುವ ಜನ, ನಗರವನ್ನು ಹಳೆಯ ಟೊರಾಂಟೋ, ಟೊರಾಂಟೋಪ್ರಾಪರ್, ಸೆಂಟ್ರೆಲ್ ಡಿಸ್ಟ್ರಿಕ್ಟ್, ಡೌನ್ ಟೌನ್ ಎಂದು ಕರೆದು ಸಮಾಧಾನ ಪಟ್ಟುಕೊಳ್ಳುತ್ತಾರೆ. == ಉಲ್ಲೇಖಗಳು ==